ಅಪರೂಪದ ಜೀವಿಗೆ ಸಂಕಷ್ಟ ಬಂದಿದೆಯಾ..? ವಿಜ್ಞಾನಿಗಳ ಆತಂಕ..
24 May, 2024
ಪ್ರಕೃತಿ ತನ್ನ ಒಡಲಿನಲ್ಲಿ ಅದೇನ್ನೆಲ್ಲ ಅದ್ಭುತಗಳನ್ನು ಇಟ್ಟುಕೊಂಡಿದೆ ಎನ್ನುವು ಕುರಿತು ವಿವರಣೆ ನೀಡುವುದೇ ಕಷ್ಟ. ಇನ್ನೂ ಚರಾಚರ ಜೀವಿಗಳ ವಿಷಯಕ್ಕೆ ಬಂದರೆ ಒಂದಿಲ್ಲೊಂದು ಆಶ್ಚರ್ಯಗಳು ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ. ಆ ಪೈಕಿಯದ್ದೆ ಘಟನೆಯೊಂದು ನಡೆದಿದೆ. ಅಮೇರಿಕಾದ ಒಂದು ಮೂಲೆಯಲ್ಲಿ ಸಿಕ್ಕ ಆ ವಿಚಿತ್ರ ಜೀವಿ ಈಗ ಜಾಗತೀಕ ಕಡಲ ತಜ್ಞರ ತಲೆಕೆಡಿಸಿ ಕೊಳ್ಳುವಂತೆಯೆ ಮಾಡಿದೆ. ಅದಕ್ಕೆ ಕಾರಣ ಈ ವಿಚಿತ್ರ ಜೀವಿಯು ಜಗತ್ತಿನಾದ್ಯಂತ ಇದುವರೆಗೆ ಕೇವಲ 31 ಬಾರಿ ಮಾತ್ರ ಕಾಣಿಸಿಕೊಂಡಿದ್ದಂತೆ..!

ಮೀನಿನ ಜಾತಿಗೆ ಸೇರಿರುವ ಈ ಜೀವ ಸಮುದ್ರದ ಆಳದಲ್ಲಿ ಕಂಡು ಬರುತ್ತದೆ. ಸಮುದ್ರದಲ್ಲಿ ಸರಿ ಸುಮಾರು 2,000 ರಿಂದ 3,300 ಅಡಿಗಳಷ್ಟು ಆಳದ ಕಡಲಿನ ಕತ್ತಲೆಯಲ್ಲಿ ಈ ಇದು ಜೀವಿಸುತ್ತದೆ ಎನ್ನಲಾಗಿದೆ. ಇದು ʻಪೆಸಿಫಿಕ್ ಫುಟ್ಬಾಲ್ ಮೀನುʼ ಎಂದು ಗುರುತಿಸಿಕೊಂಡಿದೆ. ತೀರಾ ಆಳ ಸುದ್ರದಲ್ಲಿ ಕಾಣಿಸಿಕೊಳ್ಳುವ ಫುಟ್ಬಾಲ್ ಮೀನು ಸಂಪೂರ್ಣ ಕತ್ತಲೆಯಲ್ಲಿ ವಾಸಿಸುವುದರಿಂದ ಜಗತಿಂದ ದೂರವಾಗಿದೆ. ಇಂಥಹ ವಿಶಿಷ್ಠತೆಗಳನ್ನು ಹೊಂದಿರುವ ಇದರ ವೈಜ್ಞಾನಿಕ ಹೆಸರು ʻಹಿಮಾಂಟೊಲೋಫಸ್ ಸಾಗಮಿಯಸ್ʼ ಎನ್ನುವುದಾಗಿ.

ಅಮೆರಿಕದ ಒರೆಗಾನ್ ಸ್ಟೇಟ್‌ನ ಕ್ಯಾನನ್ ಬೀಚ್‌ನಲ್ಲಿ ಈ ವಿಚಿತ್ರ ಮೀನೊಂದು ಕಂಡುಬಂದಿದ್ದರಿಂದ ನೋಡುಗರು ಶಾಕ್ ಆಗಿದ್ದಾರೆ. ಪೆಸಿಫಿಕ್ ಫುಟ್‌ವಾಲ್ ಫಿಶ್ ಮೀನಿನ ವಿಶೇಷತೆ ಎಂದರೆ ತಲೆಯ ಮೇಲೆ ಸಣ್ಣ ಕೂದಲಿನಂತಹ ಆಕೃತಿ ಇರುತ್ತದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಹವಾಯಿ, ಈಕ್ವೆಡಾರ್, ಚಿಲಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಕೆಲವೇ ಕಲವು ಕಡೆ ಬೆರಳೆಣಿಕೆಯಷ್ಟು ಬಾರಿ ಅಂದರೆ ಇದುವರೆಗೆ ಕೇಲವ 31 ಬಾರಿ ನೋಡಿರುವ ದಾಖಲೆ ಈ ಫುಟ್‌ಬಾಲ್ ಮೀನಿನದಾಗಿದೆ. ಇನ್ನೂಕಳೆದ ಎರಡು ದಿನಗಳ ಹಿಂದೆ ಅಮೇರಿಕಾದ ಒರೆಗಾನ್ ಕರಾವಳಿಯಲ್ಲಿ ಈ ವಿಶೇಷ ಮೀನು ಕಂಡುಬಂದಿರುವುದು ಇದೇ ಪ್ರಥಮ ಬಾರಿಗೆ ಎನ್ನಲಾಗಿದೆ.
ಸಂಪೂರ್ಣ ಕತ್ತಲೆಯಲ್ಲಿ ಇರುವ ಈ ಪುಟ್‌ಬಾಲ್ ಮೀನು ತನ್ನ ಉದರ ಪೂಷಣಗೆ ಬೇಟೆಯಾಡುವುದೇ ರೋಚಕ..! ಹಾಗೂ ಇದರ ಜೀವನವೂ ಭಾರಿ ವಿಚಿತ್ರ ಎನ್ನುವುದನ್ನು ಜೀವಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಕತ್ತಲೆಯಲ್ಲಿ ಮಾತ್ರ ಬೇಟೆಯಾಡಲು ಮುಂದಾಗುವ, ಇದು ತನ್ನ ತಲೆ ಹಾಗೂ ಬೆನ್ನ ಮಧ್ಯದಲ್ಲಿ ಇರುವ ಕೂದಲಿನಂತ ವಸ್ತುವನ್ನು ಕತ್ತಲೆಯಲ್ಲಿ ಹೊಳೆಯುತ್ತದೆ ಮಾಡಿಕೊಳ್ಳುತ್ತದೆ. ನಂತರ ಅದನ್ನು ಅತ್ತಿಂದ ಇತ್ತ ಅಲುಗಾಡಿಸುವ ಮೂಲಕ ಅದನ್ನು ಹುಳುಗಳಂತೆ ಕಾಣಿಕೊಳ್ಳುವಂತೆ ಮಾಡುತ್ತದೆ. ಅದನ್ನು ತನ್ನ ಬಾಯಿ ಮುಂದೆ ನೇರವಾಗಿ ಬಾಗಿಸಿ ಅಲುಗಾಡಿಸಲು ಮುಂದಾಗುತ್ತದೆ. ಅದರ ಬೆಳಕು ದೂರದ ವರೆಗೂ ಹೊಳೆಯುತ್ತದೆ. ಹೀಗಾದಾಗ ದೂರದಲ್ಲಿ ಅದನ್ನು ಕಂಡ ಸಣ್ಣ ಸಣ್ಣ ಮೀನು, ಕೀಟಗಳು ಅದನ್ನು ತಿನ್ನಲು ಬರುತ್ತವೆ. ಆಗ ಫುಟ್‌ಬಾಲ್ ಫಿಶ್ ಅವುಗಳ ಬೇಟೆಯಾಡುತ್ತದೆ.

ಈ ಜಾತಿಯ ಮೀನುಗಳು ವರ್ಷಕ್ಕೆ ಒಮ್ಮೆ ಮಾತ್ರ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆಯಂತೆ . ಇನ್ನೂ ಅಚ್ಚರಿಯ ಸಂಗತಿ ಎಂದರೆ ಒಂದು ಗಂಡು ʻಪೆಸಿಫಿಕ್ ಪೂಟ್‌ಬಾಲ್ ಮೀನುʼ ತನ್ನ ಜೀವನದಲ್ಲಿ ಒಮ್ಮೆ ಮಾತ್ರವೇ ಸಂತಾನೋತ್ಪತ್ತಿ ಕರುಣಿಸುವ ಶಕ್ತಿಯನ್ನು ಹೊಂದಿರುತ್ತೆದೆಯಂತೆ..! ಈ ಮೀನುಗಳು ಆಳ ಸಮುದ್ರದಲ್ಲಿಯೇ ಮೊಟ್ಟೆಗಳನ್ನು ಇಟ್ಟು, ಅಲ್ಲಿಯೇ ಮರಿ ಮಾಡಿ ಅಲ್ಲಿಯೇ ತಮ್ಮ ಜೀವನಸಾಗಿಸುವ ಇವುಗಳ ಆಯಸ್ಸು ಇತರ ಮೀನಿನಗಿಂತೆ ಸಾಕಷ್ಟು ಪಟ್ಟು ಹೆಚ್ಚಾಗಿರುತ್ತದೆ ಎನ್ನುವುದು ತಜ್ಷರು ನೀಡಿದ ವರದಿಯಲ್ಲಿ ಮಾಹಿತಿ ಲಭ್ಯವಿದೆ.
ಅಮೆರಿಕದ ಒರೆಗಾನ್ ಸ್ಟೇಟ್‌ನ ಕ್ಯಾನನ್ ಬೀಚ್‌ನಲ್ಲಿಕಂಡು ಬಂದ ಈ ಮೀನು ಆಳ ಸಮುದ್ರ ಬಿಟ್ಟು ಸಮುದ್ರ ತೀರಕ್ಕೆ ತಲುಪಿದ್ದು ಹೇಗೆ..? ಇಂತಹ ಪರಸ್ಥಿತಿ ಇವುಗಳಿಗೆ ಏನು ಬಂದಿರಬುವುದು..? ಇದು ಈ ಇಲ್ಲಿ ಮಾತ್ರ ಕಂಡುಬಂದಿದೆಯೇ ಅಥವಾ ಜಾಗತೀಕ ಮಟ್ಟದಲ್ಲಿ ಇರುವ ಬೇರೆಯಾವುದಾದರೂ ಕಡಲ ತೀರದಲ್ಲಿ ಕಂಡ ವರದಿಯಾಗಿದೆಯೇ ಎನ್ನುವ ಹುಡುಕಾಟ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಯ ಕರಾವಳಿಯ ಮೀನುಗಾರರು ಇಂಥಹ ಮೀನುಗಳನ್ನು ಕಂಡಿದ್ದಾರೆಯೇ ಎನ್ನುವ ಹುಡುಕಾಟವನ್ನು ಆರಂಭಿಸಿದ್ದಾರೆ. ಈ ಕುರಿತು ಕಾರವಾರದಲ್ಲಿ ಇರುವ ಮರೈನ್ ಬಾಯೋಲಾಜಿ ಕೇಂದ್ರವವರು ಹೆಚ್ಚಿನ ಹುಡುಕಾಟ ನಡೆಸುತ್ತಿದ್ದಾರೆ ಎನ್ನುವು ಮಾಹಿತಿ ಲಭ್ಯವಾಗಿದೆ.

ಕೆಲವು ಹಿರಿಯ ಮೀನುಗಾರರ ಹಾಗೂ ಸಮುದ್ರ ತಜ್ಷರ ಪ್ರಕಾರ ಈ ತರಹದ ಆಳ ಸಮುದ್ರದಲ್ಲಿ ಇರುವ ಜೀವಿಗಳು ಕಡಲಾಳದಲ್ಲಿಯೇ ಮೃತಪಟ್ಟ ನಂತರ ಕಡಲ ತೀರಕ್ಕೆ ತಲುಪುತ್ತವೆ ಎಂದು ಹೆಳುತ್ತಾರೆ. ಆದರೆ ಆಳ ಸಮುದ್ರದಲ್ಲಿ ಮಿನುಗಳು ಮೃತಪಟ್ಟಾಗ ಇತರ ದೊಡ್ಡ ಜಲಚರಗಳು ಅವುಗಳನ್ನು ತಿನ್ನುತವೆ. ಹಾಗೆ ಯಾವುದೆ ದೋಡ್ಡ ಜೀವಿಯ ಹೊಟ್ಟೆಗೆ ಆಹಾರವಾಗದಿದ್ದರೆ ಈ ರೀತಿಯಲ್ಲಿ ಸಮುದ್ರ ತೀರಕ್ಕೆ ಬಂದು ತಲುಪುತ್ತವೆ ಎಂದು ತಮ್ಮ ಅನುಭವದ ಅಭಿಪ್ರಾಯ ನೀಡುತ್ತಾರೆ.
ಸತ್ತ ಸ್ಥಿತಿಯಲ್ಲಿ ಸಿಕ್ಕಿರುವ ʻಪೆಸಿಫಿಕ್ ಪೂಟ್‌ಬಾಲ್ ಮೀನುʼ ಕಡಲ ವಿಜ್ಞಾನಿಗಳಿಗೆ ಇನ್ನೊಂದು ತಲೆನೋವು ತಂದು ಬಿಟ್ಟಿದೆ. ಈ ರೀತಿಯ ಅಪರೂಪದ ಜೀವಸಂಕುಲಗಳ ರಕ್ಷಿಸಬೇಕಾದ ಅನಿವಾರ್ಯತೆ ಕಡಲ ವಿಜ್ಞಾನಿಗಳಿಗೆ ಇದೆ. ಒಂದು ವೆಳೆ ಸಮುದ್ರದಲ್ಲಿಏನಾದರು ಕಲುಶಿತ ವಾತಾವರಣ ಉಂಟಾಗಿ ಜಲಚರಗಳ ಜೀವಕ್ಕೆ ಅಪಾಯವಾಗುತ್ತಿದೆಯೇ..? ಎನ್ನುವ ಹೊಸ ಹುಡುಕಾಟದಲ್ಲಿ ತೊಡಗುವಂತೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಇದುವರೆಗೆ ಕೇವಲ 31 ಬಾರಿ ನೋಡಿರುವ ಈ ಅಪರೂಪದಲ್ಲಿ ಅಪರೂಪವಾಗಿರುವ ಮೀನಿನ ಸಂತತಿಗೆ ಯಾವುದೆ ಧಕ್ಕೆ ಬಾರದಿರಲಿ ಎನ್ನುವುದೇ ಕಳಕಳಿ.
Publisher: ಕನ್ನಡ ನಾಡು | Kannada Naadu